Saturday, January 23, 2010

ನಮಸ್ಕಾರ !!

ನಮಸ್ಕಾರ .. ನಿಮಗೊಂದು ವಿಷ್ಯ ಗೊತ್ತಾ?? ಕಾರಿಗೂ ಬಾರಿಗೂ ಅವಿನಾಭಾವ ಸಂಬಂಧ.. ಅರೆ ಅದ್ಹೇಗೆ ಅಂತ ಕೇಳ್ತೀರಾ?? ಒಂದೊಂದಾಗಿ ಹೇಳ್ತೀನಿ ಇರಿ... ಅದಕ್ಕಾಗೆ ಈ ಬ್ಲಾಗ್ ನ ಹೆಸರು ಕಾರು-ಬಾರು... ಕಾರು ಇದ್ದವನ ಕಾರುಬಾರೆ ಬೇರೆ...
ಕಾರು ಬೇಕು ಅನ್ನೋ ಆಸೆ ಯಾರಿಗಿಲ್ಲ ಹೇಳಿ... ಬಡವನಿಂದ ಹಿಡಿದು ಕುಬೇರನ ತನಕದವರು, ಮಕ್ಕಳಿಂದ ಮುದುಕರವರೆಗೆ, ಅಂಕಲ್ ನಿಂದ ಹಿಡಿದು ಆಂಟಿ ವರೆಗೆ ಎಲ್ಲರಿಗೂ ಕಾರು ಬೇಕು...
ನಾನು ಗಣರಾಜ ಜೋಷಿ , ಓದಿದ್ದು ITI Automobiles..ಮಾಡೋದು ಹೊಟ್ಟೆಪಾಡಿಗಾಗಿ ಕೆಲಸ... ಕಾರಿನ ಒಳಗೆ-ಹೊರಗೆ ಅಲ್ಲದಿದ್ದರೂ ಆಬದಿ-ಈಬದಿ ಬಗ್ಗೆ ತಿಳಿದುಕೊಂಡಿದ್ದೇನೆ..ಈಗ ನಿಮಗೆಲ್ಲರಿಗೆ ಟಾಟ ನಾನೋ ದಿಂದ ಹಿಡಿದು, ಹಮ್ಮರ್ ತನಕ ಎಲ್ಲ ಕಾರುಗಳ ವಿಷಯ ತಿಳಿಸಿ ಹೇಳುತ್ತೇನೆ.. ಈ ಕಾರುಗಳ ವಿಶೇಷ, ಇದನ್ನು ಮಾರುವವರ ವೇಷ, ಮಂಕು ತಿಮ್ಮ ನಾಗುವ ಗ್ರಾಹಕನ ವಿಶೇಷ... ಸದ್ಯಕ್ಕೆ ಎಲ್ಲವೂ ಸಶೇಷ....
ಈ ಬ್ಲಾಗ್ ನಲ್ಲಿ ನಾನು ಮತ್ತು ನನ್ನ ಅಣ್ಣ (ದೊಡ್ಡಮ್ಮನ ಮಗ) ಬರೆಯಲಿದ್ದೇವೆ...ಆತ ನನಗೊಂಥರ ಗಾಡ್ ಫಾದರ್ ಇದ್ದಹಂಗೆ.. ಅಣ್ಣನ "ರವಿಕಾಂತ ಗೋರೆ" ಅನ್ನೋ ಬ್ಲಾಗ್ ಈಗಾಗಲೇ ಮೂಡಿಬರುತ್ತಿದೆ...ಅಲ್ಲಿ ಆತ ನಗಿಸುತ್ತಾನೆ, ಅಳಿಸುತ್ತಾನೆ, ಮಾಹಿತಿ ನೀಡುತ್ತಾನೆ ಹಾಗೆ ಒಮ್ಮೊಮ್ಮೆ ಬೆಚ್ಚಿ ಬೀಳಿಸುತ್ತಾನೆ...http://ravikanth-gore.blogspot.com ಒಮ್ಮೆ ನೀವೇ ಭೇಟಿ ಕೊಟ್ಟು ನೋಡಿ...ನಿಮ್ಮ ಅಭಿಪ್ರಾಯ ನಮಗೆ ಮುಖ್ಯ.. ನಿಮ್ಮ ಪ್ರಶ್ನೆಗಳಿಗೆ ಆದಷ್ಟು ಬೇಗನೆ ಉತ್ತರಿಸಲು ಪ್ರಯತ್ನಿಸುತ್ತೇವೆ.. ನಂಜೊತೆ ನೀವಿದ್ದೀರಲ್ಲ..?

1 comment:

  1. ಜೋಷಿಯವರೇ...ಕಾರಿನಲ್ಲಿ ಬಾರು ಓಪನ ಮಾಡಿ ನಮ್ಮ ಗುಂಡ ನನ್ನ ಚುಟುಕದಲ್ಲಿ ವಿರಾಜಮಾನವಾಗಿದ್ದ ದಿನ ನನಗೆ ನೆನಪಾಯ್ತು ನಿಮ್ಮ ಕಾರು-ಬಾರಿನ ಬಗ್ಗೆ ಓದಿ....ಹಹಹ

    ReplyDelete