Wednesday, January 27, 2010

ನ್ಯಾನೋ!!

ಕಾರು ಕಾರು ಕಾರು... ಕಳೆದ ವರ್ಷ ಎಲ್ಲಿ ನೋಡಿದರೂ ಇದರದ್ದೇ ಸುದ್ದಿ... "ನ್ಯಾನೋ", ಬಹುಶ ಈ ಕಾರಿನಷ್ಟು ಬೇರೆ ಯಾವುದೇ ಕಾರು ವಿಶ್ವ ದಾದ್ಯಂತ ಸುದ್ದಿ ಮಾಡಿರಲಿಲ್ಲ... ನನಗೆ ಬೇಕು ನನಗೆ ಬೇಕು ಅಂತ ಮುಗಿ ಬಿದ್ದವರಿಗಂತೂ ಕಮ್ಮಿಯಿಲ್ಲ..ಕಾರಣ ಅದರ ಬೆಲೆ... ಕೇವಲ ಒಂದು ಲಕ್ಷ (ಒಂದು ಲಕ್ಷ ಅಂದ್ರೆ  ಕೇವಲಾನ ನಿಮಗೆ ಅಂತ ಕೇಳಬೇಡಿ!!!). ಆದರೆ ನ್ಯಾಯ ಬೆಲೆ ಅಂಗಡಿಯಲ್ಲಿ ಸೀಮೆ ಎಣ್ಣೆ ಕೊಡುವಂತೆ, ಇದು ಸಹ ಕೆಲವರಿಗೆ ಮಾತ್ರ ಕೊಡುತ್ತೇವೆ.. ಅದಕ್ಕೂ ವರ್ಷಗಟ್ಟಲೆ ಕಾಯಬೇಕು ಅಂತ "ಟಾಟ " ಕಂಪನಿ ಹೇಳಿದಾಗ ಹೆಚ್ಚಿನವರಿಗೆ ನಿರಾಸೆಯಾಗಿತ್ತು... ಇರಲಿ ಬಿಡಿ..ಈಗ ಈ ನ್ಯಾನೋ ಬಗ್ಗೆ ಸ್ವಲ್ಪ ಪುರಾಣ ಹೇಳುತ್ತೇನೆ, ಕೇಳುವಂಥವರಾಗಿ...


ಈ ಒಂದು ನ್ಯಾನೋ ಎಂಬ ಚಿಕ್ಕ ಕಾರು ತಯಾರಿಸಬೇಕು ಅಂತ ಟಾಟಾ ಅಂದುಕೊಂಡಿದ್ದು ಬಹಳ ಹಿಂದೆ.. ೨೦೦೩ ರಲ್ಲಿ ಈ ಕಾರಿನ ಬಗ್ಗೆ ಸಂಶೋಧನೆಗಳು ಆರಂಭವಾಗಿ , ೨೦೦೫ ರ ಸುಮಾರಿಗೆ ಇಂತಹದೆ ಪ್ರಯತ್ನದಲ್ಲಿ ಟಾಟಾ ಬಿಡುಗಡೆ ಮಾಡಿದ್ದು "ಏಸ್ " ಅನ್ನೋ ಮಿನಿ ಗೂಡ್ಸ್ ಆಟೋ... ಇದು ತುಂಬಾ ಜನಪ್ರಿಯವಾಯಿತು.. ಇದೇ ಮಾದರಿಯಲ್ಲಿ ಸಾಮಾನ್ಯ ಜನರಿಗೂ ಕೈಗೆ ಎಟುಕುವಂಥ ಕಾರಿನ ಕನಸು ಪ್ರಾರಂಭಗೊಂಡಿತು...ಈ ಕಾರು ಡಿಸೈನ್ ಗೊಂಡಿದ್ದು ಇಟಲಿ ಯಲ್ಲಿ... ನ್ಯಾನೋ ಕಾರಿನಲ್ಲಿ ೩ ವಿವಿಧ ಬಗೆಗಳಿವೆ...೧. ನ್ಯಾನೋ ಸಾಮಾನ್ಯ, ೨. ನ್ಯಾನೋ ಸಿ ಎಕ್ಸ್  ೩. ನ್ಯಾನೋ ಎಲ್ ಎಕ್ಸ್ ..


ಬೆಲೆ ಇಷ್ಟು ಕಡಿಮೆ ಹೇಗಾಯಿತು..
ಇದರ ಬೆಲೆ ಕಡಿಮೆ ಮಾಡೋದಕ್ಕಾಗಿ ಟಾಟ ಕೆಲವು ನಿಯಮಗಳನ್ನ ಅನುಸರಿಸಿತು... ಬೇಸಿಕ್ ಮಾಡೆಲ್ ನಲ್ಲಿ AC  ಇಲ್ಲಾ, ಪವರ್ ಸ್ಟೀರಿಂಗ್ ಇಲ್ಲಾ, ಬದಿಯ ಗ್ಲಾಸುಗಳು ನಾವೇ ಮೇಲೆ ಕೆಳಗೆ ಮಾಡಬೇಕು (manual ), ಒಂದೇ ವಯಪೆರ್, ಸ್ಟೀಲಿನ ಬದಲು ಕೆಲವು ಕಡೆ ಪ್ಲಾಸ್ಟಿಕ್ ಬಳಕೆ, ಗಾಳಿ ಬಲೂನು ಇಲ್ಲ, ಚಕ್ರಕ್ಕೆ ೪ ಬೋಳ್ತುಗಳ ಬದಲು ೩  ಹೀಗೆ.....
ಬೆಂಗಳೂರಿನಲ್ಲಿ ಟಾಟ ನ್ಯಾನೋ ದ ಬೆಲೆ ಈ ರೀತಿ ಇದೆ..
೧. ಟಾಟ ನ್ಯಾನೋ BSIII -- ೧,೩೧,೦೨೮ ರೂಪಾಯಿ (ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ) (ನಿಮಗೆ ಏನೂ ಇತರ ಸೌಲಭ್ಯಗಳು ಈ ಮಾದರಿಯಲ್ಲಿ ಇಲ್ಲ)
೨. ಟಾಟ ನ್ಯಾನೋ CX BSIII --೧,೫೬,೦೨೭ ರೂಪಾಯಿ (ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ) (ಈ ಮಾದರಿಯಲ್ಲಿ AC ಇದೆ)
೩. ಟಾಟ ನ್ಯಾನೋ CX BSIII --೧,೫೯,೦೨೭ ರೂಪಾಯಿ (ಚಿನ್ನ ಮತ್ತು ಬೆಳ್ಳಿಯ ಬಣ್ಣಗಳಲ್ಲಿ) (ಈ ಮಾದರಿಯಲ್ಲಿ AC ಇದೆ)
೪. ಟಾಟ ನ್ಯಾನೋ LX BSIII --೧,79,೨೭೮ ರೂಪಾಯಿ (ಚಿನ್ನ , ಬೆಳ್ಳಿಯ ಮತ್ತು ಸೂರ್ಯಕಾಂತಿ ಹಳದಿ ಬಣ್ಣಗಳಲ್ಲಿ) (ಈ ಮಾದರಿಯಲ್ಲಿ AC , ಪವರ್ ಸ್ಟೀರಿಂಗ್, ಪವರ್ ವಿಂಡೋ , ಫ್ಯಾಬ್ರಿಕ್ ಸೀಟು, ಮತ್ತು ಸೆಂಟ್ರಲ್ lock  ಇದೆ)
ಈ ಕಾರು ಎರಡು ಸಿಲಿನ್ದೆರ್  ಎಂಜಿನ್ ಹಾಗೋ ೬೨೪ cc (೩೩ ಹೊರ್ಸೆಪೋವೆರ್) ನದ್ದಾಗಿದೆ...
ಈ ಕಾರು ಸಾಧಾರಣವಾಗಿ ಒಂದು ಲೀಟರ್ ಪೆಟ್ರೋಲ್ ಗೆ  ೨೮ ಕಿಲೋಮೀಟರು  ಮೈಲೇಜ್ ಕೊಡುತ್ತೆ.. ನಗರದ ಟ್ರಾಫಿಕ್ ನಲ್ಲಿ ೨೨-೨೪ ಕೊಡುತ್ತೆ ಅನ್ನುತ್ತಾರೆ ....


ಕಾರಿನ ಉದ್ದ ಮಾರುತಿ ೮೦೦ ಕ್ಕಿಂತ ಶೇಕಡಾ ಎಂಟರಷ್ಟು ಕಮ್ಮಿ ಆದರೆ ಒಳಗಿನ ಜಾಗ ಅದಕ್ಕಿಂತ ೨೩ ಶೇಕಡಾ ಜಾಸ್ತಿಯಿದೆ...
ಈ ಕಾರಿನ ಇನ್ನಷ್ಟು ವಿಶೇಷ ಗಳ ಕಡೆ ಮುಂದೆ ಬರೆಯುವೆ...
ಹಾಗಾದ್ರೆ ನಾನು ಈ ಕಾರು ಕೊಳ್ಳಬಹುದಾ?
ಖಂಡಿತವಾಗಿ.. ನಿಮಗೆ ಕಾರು ಬೇಕೇ ಬೇಕು ಅಂತ ಅನ್ನಿಸೋದಾದರೆ, ಕೈಯಲ್ಲಿ ಕಾಸು ಕಮ್ಮಿಯಿದ್ದರೆ, ಸ್ವಲ್ಪ ಕಾಯುವ ತಾಳ್ಮೆಯಿದ್ದರೆ, ಬೈಕಿನಲ್ಲಿ ತಿರುಗಾಡಿ ಕಪ್ಪಗಾಗುತ್ತಿದ್ದೇನೆ  ಅಂತ ಹೆಂಡತಿ ನಿಮಗೆ ಬಯ್ಯೋದೇ ಆದರೆ, ತೆಗೆದುಕೊಳ್ಳಿ... ಇಲ್ಲಾಂದರೆ ಮಾರುತಿ ೮೦೦, ಅಥವಾ ಕಮ್ಮಿಯಲ್ಲಿ  ಸಿಗುವ  ಅಲ್ಟೋ ದಂತಹ ಸೆಕೆಂಡ್ ಹ್ಯಾಂಡ್ ಕಾರು ಎಷ್ಟೋ  ವಾಸಿ...ಆದರೆ ಸದ್ಯಕ್ಕೆ ಮಾತ್ರ ನ್ಯಾನೋ ತುಂಬಾ ಹೆಸರುವಾಸಿ...

ಮುಂದುವರೆಯುವುದು..
ಚಿತ್ರ ಕೃಪೆ : ಅಂತರ್ಜಾಲ

5 comments:

 1. ನ್ಯಾನೋ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ

  ReplyDelete
 2. ನ್ಯಾನೊ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದಕಾಗಿ ಧನ್ಯವಾದಗಳು.
  ಮು೦ದುವರೆಸಿ.

  ReplyDelete
 3. 'ರವಿಕಾಂತ ಗೋರೆ ' ಅವರೇ..,

  ಹೌದೇನ್ರೀ... ಮುಂದಕ್ ಶುರು ಮಾಡ್ರೀ..

  ನನ್ನ 'ಮನಸಿನಮನೆ'ಗೆ...:http//manasinamane.blogspot.com

  ReplyDelete
 4. ಹೌದು ಎಲ್ಲರ್ಗೂ ಎಟಕೋ ಹೊತ್ತಿಗೆ ದುಬಾರಿಯಾಗಿರುತ್ತೇನೋ ಅಲ್ಲವಾ....?

  ReplyDelete
 5. ನ್ಯಾನೋ ಕಾರಿನ ಬಗೆಗೆ ಒಳ್ಳೆಯ ಲೇಖನ

  ReplyDelete